Sunday, December 2, 2007

ನಂದಿಗ್ರಾಮದ ದೌರ್ಜನ್ಯ: ಮಂಥನ ಸ್ವಾಗತ!

ಕಮ್ಯುನಿಷ್ಟರು ಪಶ್ಚಿಮ ಬಂಗಾಲದ ನಂದಿಗ್ರಾಮದಲ್ಲಿ ನಡೆಸಿದ ದೌರ್ಜನ್ಯ, ದೇಶದಲ್ಲೆಲ್ಲ ಅದರ ವಿರುದ್ಧ ಅನೇಕರ ಹೇಳಿಕೆ, ಪ್ರತಿಭಟನೆಗಳು ನಿಮಗೆ ತಿಳಿದೇ ಇವೆ. ಇವೆಲ್ಲದರ ಮಧ್ಯೆ ಬೆಂಗಳೂರಿನ ‘ಮಂಥನ’ ವೇದಿಕೆಯು, ನಂದಿಗ್ರಾಮದಲ್ಲಿ ಫ್ಯಾಸಿಸ್ಟ್ ಅವತಾರಿ ಕಮ್ಯುನಿಷ್ಟರ ದೌರ್ಜನ್ಯವನ್ನು ಸ್ವಾಗತಿಸಿದ್ದು ವಿಶೇಷವಾಗಿದೆ.


ನಂದಿಗ್ರಾಮದ ದೌರ್ಜನ್ಯದ ಬಗ್ಗೆ ಮಂಥನ ಏರ್ಪಡಿಸಿರುವ ವಿಚಾರಗೋಷ್ಠಿಯ ಆಹ್ವಾನಪತ್ರಿಕೆಯ ತುಣುಕೊಂದರಲ್ಲಿ "ಮಂಥನ ಸ್ವಾಗತಿಸುತ್ತಿದೆ" ಎಂದು ಬರೆದಿರುವುದನ್ನು ನೀವು ಇಲ್ಲಿ ನೋಡಬಹುದು:


ತಣ್ಣಗಾದ ವಿಜಯ ಕರ್ನಾಟಕ




ಎಸ್ ವಿ ಪದ್ಮನಾಭ್ ಅವರ ವ್ಯಂಗಚಿತ್ರಗಳಿಂದ ’ಗರಮಾಗರಂ’ ಆಗಿರುತ್ತಿದ್ದ ವಿಜಯ ಕರ್ನಾಟಕ ಈಗ ತಣ್ಣಗಾಗಿರುವುದನ್ನು ನೀವು ಗಮನಿಸಿರಬಹುದು. ವಿಜಯಕರ್ನಾಟಕ ಈಗ ತನ್ನ ಹೊಸ ಬತ್ತಳಿಕೆಯಿಂದ ಬಾಣಗಳನ್ನು ಬಿಡ್ತಾ ಇದೆ. ಪದ್ಮನಾಭರು ಕನ್ನಡ ಪ್ರಭ ವನ್ನು ಬಿಸಿಯಾಗಿಸಲು ಹೊರಟಿದ್ದಾರೆ. ನಂಬರ್ ಒನ್ ಪತ್ರಿಕೆ ಯಾಕೆ ಬಿಟ್ಬಿಟ್ರು ಅನ್ನೋದು ಸುದ್ದಿಮನೆಯ ಗುಸುಗುಸು. ವಿಜಯ ಕರ್ನಾಟಕ ಟೈಂಸ್ ವಶವಾದನಂತರ ಒಳಗೆ ಹಲವು ಚಟುವಟಿಕೆಗಳು ನಡೆಯುತ್ತಿತ್ತು, ಇದೀಗ ಪದ್ಮನಾಭರು ಹೊರಗೆ ಬಂದಿದ್ದಾರೆ. ಇನ್ನೇನೇನು ಆಗುತ್ತೋ ನೋಡ್ಬೇಕು.

Friday, November 30, 2007

ಮಲೇಷ್ಯಾ ವಿವಾದ: ಬೀಜೇಪಿಗೂ ಡೀಯಂಕೆಗೂ ಬಿಸಿ

ರಾಮಸೇತು ವಿವಾದದಲ್ಲಿ ಬಡಿದಾಡಿಕೊಳ್ತಾ ಇರೋ ಬಿಜೆಪಿ ಮತ್ತು ಡಿಎಂಕೆ ಪಕ್ಷಗಳು ಈಗ ಮಲೇಷ್ಯಾ ವಿವಾದದಲ್ಲಿ ಒಂದಾಗಿ ಯುಪಿಎ ಮೌನದ ವಿರುದ್ಧ ಹೋರಾಡ್ತಾ ಇದಾರೆ. ಅಲ್ಲೇನಾಗಿದೆ ಎಂದು ನೋಡಲು ನೇರ ಮಲೇಷ್ಯಾಗೆ ಹೋದೆ. ಅಲ್ಲಿ ಹೋಗಿದ್ದೇ ನನ್ನನ್ನ ಕೊಲ್ಲೋ ಥರಾ ನೋಡೋಕೆ ಶುರು ಮಾಡಿದ್ರು. ನಾರಾಯಣ ನಾರಾಯಣ! ಜೀವ ಉಳಿದ್ರೆ ಸಾಕು ಅಂತ ಅಲ್ಲಿಂದ ಮಾಯವಾದವ ನೇರ ಭಾರತಕ್ಕೆ ಹೋಗಿ ಅಲ್ಲಿನ ಪೇಪರ್ ನೋಡಿದ್ರೆ...

ಮಲೇಷ್ಯಾದಲ್ಲಿ ಹಿಂದುಗಳಿಗೆ ಅನ್ಯಾಯ ಆಗ್ತಿದೆ, ಹಿಂದುಗಳ ಹಕ್ಕುಗಳಿಗೆ ಧಕ್ಕೆಯಾಗಿದೆ, ದೇಗುಲಗಳು ನಾಶವಾಗ್ತಿದೆ, ಹಿಂದುಗಳನ್ನು ಅಮಾನೀಯವಾಗಿ ನೋಡ್ತಿದ್ದಾರೆ, ಬದುಕೋಕೆ ಬಿಡ್ತಿಲ್ಲಾ.. ಅಂತೆಲ್ಲಾ ಆರೋಪಿಸ್ತಿರೋ ಬೀಜೇಪಿ, ಭಾರತ ಸರಕಾರ ಮಧ್ಯ ಪ್ರವೇಶಿಸಬೇಕು ಅಂತಾ ಇದೆ.
ಅಲ್ಲಿ ತಮಿಳರ ವಿರುದ್ಧ ದೌರ್ಜನ್ಯ ನಡೀತಿದೆ, ತಮಿಳರ ಸ್ಥಿತಿ ಹೀನಾಯವಾಗಿದೆ, ತಮಿಳರಿಗೆ ಸ್ವಾತಂತ್ರ್ಯವಿಲ್ಲ.. ಅಂತೆಲ್ಲ ಡೀಎಂಕೆ ಹೇಳ್ತಾ ಇದೆ.

ಇದು ನಂ ದೇಶದ ವಿಚಾರ, ನೀವು ತಲೆ ಹಾಕ್ಬೇಡಿ ಅಂತ ಮಲೇಷ್ಯಾ ಪ್ರಧಾನಿ...

ಏನೇ ಆಗ್ಲಿ, ಹಿಂದುಗಳು ಅಂದ್ರೂ ತಮಿಳರು ಅಂದ್ರು ಒಂದೇ ಅಂತ ಜನರಿಗಾದ್ರು ಅರ್ಥವಾಗ್ಲಿ ಅಷ್ಟು ಸಾಕು.

Wednesday, February 28, 2007

ಗೌರವ ಬೇಡ, ಗರ್ವ ಸಾಕು: ಮುತ್ತಪ್ಪ ರೈ!

ಮುತ್ತಪ್ಪ ರೈಗೆ ಗರ್ವ ಒಂದೇ ವಾರದಲ್ಲಿ ಸಾಕಾಗಿದೆ. ನನ್ನ ಹೆಸರು 'ಗೌರವ ಸಂಪಾದಕ' ಹುದ್ದೆಯಿಂದ ತೆಗೆದುಬಿಡಿ ಎಂದು ಗರ್ವ ಬಳಗದ ಬಳಿ ಹೇಳಿದ್ದಾರೆ. ಹೊಸ ರೂಪದಲ್ಲಿ ಪುನರಾರಂಭಗೊಂಡ ಗರ್ವದ ಗೌರವ ಸಂಪಾದಕ ಎಂದು ತಮ್ಮ ಹೆಸರನ್ನು ಹಾಕಲು ಮುತ್ತಪ್ಪ ರೈ ಒಪ್ಪಿದ್ದರು. ತಮ್ಮ ಭೂಗತ ಜೀವನದ ಕಥೆಯನ್ನು ಮುತ್ತಪ್ಪ "ರೈ"ಟ್ಸ್ ಎಂಬ ಕಾಲಂ ಅಡಿ ಬರೆಯುವುದಾಗಿ ಒಪ್ಪಿದ್ದರು. ಆದರೆ ಪತ್ರಿಕೆ ಸಂಪಾದಕ (ಕಿರಿ)ಕಿರೀಟದಿಂದ ಅವರು ರೋಸಿ ಹೋಗಿದ್ದಾರೆ. ಇದಕ್ಕೆ ಕಾರಣ ಸಾಯಿ ಫೌಂಡೇಷನ್ನಿನ ಪದ್ಮಾ ಭಟ್ ಬಗ್ಗೆ ಗರ್ವದಲ್ಲಿ ಬಂದ ಲೇಖನ. ಅದನ್ನೋದಿದ ಪದ್ಮಾ ನೇರ ಮುತ್ತಪ್ಪ ರೈ ಬಳಿ ಹರಿಹಾಯ್ದಿದ್ದರು. ಅಷ್ಟಕ್ಕೇ ಸಾಕಾಗಿದೆ ರೈಗೆ. ನಾನು ನನ್ನ ಲೇಖನವನ್ನೇನೋ ಬರೆಯುತ್ತೇನೆ. ಆದರೆ ನನ್ನನ್ನು ಗೌರವ ಸಂಪಾದಕ ಎಂದು ಹಾಕಬೇಡಿ ಎಂದು ಹೇಳಿದ್ದಾರೆ.

Monday, February 26, 2007

ಹೊಸ ಗರ್ವ: ಮುತ್ತಪ್ಪ ರೈ ಕೈಯಲ್ಲಿ ಗನ್ನಲ್ಲ, ಪೆನ್ನು!

ನಾರಾಯಣ ನಾರಾಯಣ!
ಮುತ್ತಪ್ಪ ರೈ ಕೈಯಲ್ಲೂ ಪೆನ್!
ಹೊಸ ರೂಪದಲ್ಲಿ ಮತ್ತೆ ಆರಂಭವಾದ 'ಗರ್ವ' ವಾರಪತ್ರಿಕೆಗೆ ಮುತ್ತಪ್ಪ ರೈ ಬರೆಯುತ್ತಿದ್ದಾರಂತೆ! ಭೂಗತ ಜಗತ್ತಿನಲ್ಲಿ ಗನ್ ಹಿಡಿಯುತ್ತಿದ್ದ ರೈ ಮುಂದೆ ಜೈಲಿನಿಂದಲೇ ಭೂಗತ ಜಗತ್ತನ್ನು ನಿಯಂತ್ರಿಸಿ ಸುದ್ದಿ ಮಾಡಿದ್ದರು. ಈಗ ವಾರ ಪತ್ರಿಕೆಯೊಂದಕ್ಕೆ ಅವರು ಗೌರವ ಸಂಪಾದಕರು.
ವಾರ ಪತ್ರಿಕೆಗಳ ವಾರ್ ಆರಂಭವಾಗುತ್ತಿರುವ ಸೂಚನೆ ಕಂಡುಬರುತ್ತಿದ್ದು, ಓದುಗರು ಸತತ ಬದಲಾವಣೆಯನ್ನು ಕಾಣುತ್ತಿದ್ದಾರೆ. ಇದೇ ವೇಳೆ ಇಂದ್ರಜಿತ್ ಲಂಕೇಶರ ಲಂಕೇಶ್ ಪತ್ರಿಕೆಯನ್ನು ನಂದಿ ಕಾರಿಡಾರನ ಅಶೋಕ್ ಖೇಣಿ ಖರೀದಿಸಲಿದ್ದಾರೆಂಬ ಸುದ್ದಿಯಿದೆ. ಇರುವ ಟ್ಯಾಬ್ಲಾಯ್ಡ್ ಗಳಲ್ಲಿ ಅತ್ಯಂತ ಹಳೆಯ ವಿಕ್ರಮ ಈಗಾಗಲೇ ಹೊಸ ಸಂಪಾದಕ ಸುಧೀಂದ್ರ ಕಂಚಿತೋಟ ನೇತೃತ್ವದಲ್ಲಿ ಹೊಸ ಖದರನ್ನು ಪಡೆದುಕೊಂಡಿದೆ.
ವಿಧಾನ ಸೌಧದಲ್ಲಿ ಬಾಂಬ್ ಇಟ್ಟು ಭಯೋತ್ಪಾದನೆಯ ವಿರುದ್ಧ ಹೋರಾಟದಿಂದ ಸುದ್ದಿ ಮಾಡಿದ ಮಾಜಿ ಪೊಲೀಸ್ ಅದಿಕಾರಿ ಗಿರೀಶ್ ಮಟ್ಟಣ್ಣವರ್ ಈಗ ಗರ್ವದಲ್ಲಿ ಎನ್-ಕೌಂಟರ್ ಅಂಕಣ ಬರೆಯುತ್ತಿದ್ದಾರೆ. ಹೊಸ ಗರ್ವದ ಹಿಂದಿರುವ ಮುಖ್ಯ ಕೈ ಅವರದೆ ಎಂದು ಹೇಳಲಾಗುತ್ತಿದೆ. ಮೊದಲು ಹೇಳುತ್ತಿದ್ದುದನ್ನೇ ಇನ್ನೂ ಜೋರಾಗಿ ಕೂಗಿ ಹೇಳುವ ಉದ್ದೇಶವಿದೆ ಎಂದು ಗರ್ವದ ಸಂಪಾದಕೀಯ ಸೂಚಿಸಿದೆ. ಗರ್ವ ತನ್ನ ಸದಭಿರುಚಿಯನ್ನು ಉಳಿಸಿಕೊಳ್ಳುತ್ತಿದೆಯೇ ಅಲ್ಲ ಹಳದಿ ಬಣ್ಣಕ್ಕೆ ತಿರುಗುತ್ತದೆಯೇ ಕಾಡು ನೋಡಬೇಕಿದೆ.
ಮಾಜಿ ಭೂಗತ ದೊರೆಯ ಗನ್(ಅಲ್ಲ ಪೆನ್) ಮತ್ತು ಮಾಜಿ ಪೋಲಿಸ್ ಅಧಿಕಾರಿಯ ಎನ್ಕೌಂಟರ್ -ಗರ್ವ ಸ್ವಾಭಿಮಾನವೋ ಅಲ್ಲ ಅಹಂಕಾರವೋ ಅರ್ಥವಾಗುತ್ತಿಲ್ಲ. ನಾರಾಯಣ ನಾರಾಯಣ!

Tuesday, February 6, 2007

Sunday, February 4, 2007

ಶಿಲ್ಪಾ ಮಾನ 'ಭಾರೀ ಮೊತ್ತ'ಕ್ಕೆ ಹರಾಜು!

ಬಿಗ್ ಬ್ರದರ್ 'ರಿಯಾಲಿಟೀ ಶೋ'ದಲ್ಲಿ ಶಿಲ್ಪಾ ಮಾನ ಹರಾಜಾಗಿರುವುದು ಈಗ ಭೂಲೋಕದಲ್ಲೆಲ್ಲ ಸುದ್ದಿ.
ಅದೆಲ್ಲಾ ಸರಿ, ನಮ್ಮ ಮಾನವನ್ನೂ ಹರಾಜು ಹಾಕಿ ಎಂದು ಅಪ್ಸರೆಯರಿಂದ ಮೊದಲ್ಗೊಂಡು ಎಲ್ಲರೂ ನನಗೆ ದುಂಬಾಲು ಬೀಳುತ್ತಿದ್ದಾರಲ್ಲ, ನಾರಾಯಣ ನಾರಾಯಣ!
ನಿನ್ನೆ ದೇವಲೋಕಕ್ಕೆ ಹೋಗಿದ್ದೆ. ಶಿಲ್ಪಾ ಮಾನ ಹರಾಜಾದ ಸುದ್ದಿ ಅಲ್ಲೆಲ್ಲ ಹೇಳಿ ಭಾರತೀಯರಿಗೆ ಭೂಲೋಕದಲ್ಲಿ ಬಂದಿರುವ ದುರ್ಗತಿಯ ಬಗ್ಗೆ ವಿವರಿಸಬೇಕೆಂದುಕೊಂಡಿದ್ದೆ. ಆದರೆ ಈಗೀಗ ನಾನು ಹೋದ ಕೂಡಲೇ ಸುದ್ದಿಗಾಗಿ ನನ್ನನ್ನು ಸುತ್ತುವರೆಯುವ ಕುತೂಹಲಿಗಳೇ ಇಲ್ಲವಲ್ಲ, ಇವರಿಗೆ ಭೂಲೋಕದ ವಿದ್ಯಮಾನದ ಬಗ್ಗೆ ಆಸಕ್ತಿಯೇ ಕಡಿಮೆಯಾಗಿದೆಯಲ್ಲ ಎಂದು ಕೊಳ್ಳುತ್ತಿದ್ದಂತೆಯೇ ಬಂದ ಊರ್ವಶಿ, "ನಾನೂ ಬೈಸಿಕೊಳ್ಳಲು ತಯಾರಿದ್ದೇನೆ. ಅಷ್ಟೊಂದು ಹಣ ಸಿಗುವುದಾದರೆ ಎಷ್ಟು ಬೇಕಾದರೂ ಬೈಯಲಿ" ಎಂದು ಮಾತನಾಡಲು ಆರಂಭಿಸಿದಳು.
ನಾರಾಯಣ ನಾರಾಯಣ! ನನಗೇನೂ ಅರ್ಥವಾಗುತ್ತಿಲ್ಲವಲ್ಲ! ಬೈದರೆ ಹಣ ಸುಗುತ್ತದೆಯೇ? ಆ ರೀತಿಯ ಶಕುನ ಯಾವ ಪಂಚಾಂಗದಲ್ಲಿದೆ ಎಂದು ಕೇಳಿದೆ. ತ್ರಿಲೋಕ ಸಂಚಾರಿಗಳಿಗೆ ನಾನು ಹೇಳಬೇಕೆ? ಶಿಲ್ಪಾ ಶೆಟ್ಟಿಯ ಮಾನ ಭಾರೀ ಮೊತ್ತಕ್ಕೆ ಹರಾಜಾಗಿದೆ ಎಂದು ಭೂಲೋಕ ಟೈಂಸ್ ವರದಿಮಾಡಿದೆ ಎಂದಳು. ನಾರಾಯಣ ನಾರಾಯಣ! ಭೂಲೋಕ ಟೈಂಸ್ ಈಗ ದೇವಲೋಕದಲ್ಲೂ ಸಿಗತ್ತಾ? ಅಚ್ಚರಿಯಿಂದ ಕೇಳಿದಾಗ, ಇಂಟರ್ನೆಟ್ಟಿನಲ್ಲಿ ಬರುತ್ತದೆ ಎಂದಳು. ನನಗಿಂತಲೂ ವೇಗವಾಗಿ ಬರುವ ಎಂಟರ್ನೆಟ್ಟು ಯಾರು ಎಂದು ಕೇಳಿದೆ. ಅದಕ್ಕೆ ಕಂಪ್ಯೂಟರ್, ನೆಟ್ವರ್ಕ್, ವೆಬ್ ಸೈಟು... ಹೀಗೆ ಏನೇನೋ ವಿವರಿಸ ಹೊರಟಳು. ನನಗೇನೂ ಅರ್ಥವಾಗಲಿಲ್ಲ.
ಅದಿರಲಿ, ಶಿಲ್ಪಾ ಮಾನ ಹರಾಜಾಗಿರುವುದು ಎಂದರೆ ಅವಳಿಗೆ ಅವಮಾನವಾಗಿದೆ ಎಂದು ಅರ್ಥ. ಅವಳಿಗೆ ಹಣ ಸಿಕ್ಕಿದೆ ಎಂದಲ್ಲ ಅಂತ ವಿವರಿಸಿದೆ. ಅದಕ್ಕೆ ಅವಳು, "ನಿಮಗೆ ತಿಳಿದಿಲ್ಲವೇ ನಾರದ ಮಹರ್ಷಿಗಳೇ? ಶಿಲ್ಪಾ ಮಾನ ಹರಾಜಾದ ಬಳಿಕ ಆಕೆಗೆ ಭಾರೀ ಜಾಹೀರಾತಿನ, ಸಂದರ್ಶನದ ಅವಕಾಶ ಬರುತ್ತಿದೆಯಂತೆ... ಒಂದು ಸುದ್ದಿಯ ಪ್ರಕಾರ ಮಾನಕ್ಕೆ ಬದಲಾದಿ ಆಕೆ ಪಡೆಯುತ್ತಿರುವುದು ಬರೋಬ್ಬರಿ ೮೭ ಕೋಟಿ!... ಬ್ರಿಟಿಶ್ ಪ್ರಧಾನಿ ಜೊತೆಗೆ ಊಟ ಸಿಗುತ್ತಂತೆ... ನಾನೂ ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬೇಕಾದರೆ ಪೂರ್ತಿ ದೇವಲೋಕದವರನ್ನೂ, ದೈವ ಜನಾಂಗವನ್ನೂ ಬೈಯಲಿ. ಪರವಾಗಿಲ್ಲ" ಎಂದು ಶುರುಹಚ್ಚಿಕೋಡಳು.
ಅಲ್ಲಿಂದ ಕೂಡಲೇ ಮಾಯವಾದ ನಾನು ನೇರ ಇಂಗ್ಲೆಂಡಿಗೆ ಹೋಗುತ್ತಿದ್ದೇನೆ. ನನ್ನನ್ನೂ ಯಾರಾದರೂ ನಿಂದಿಸುತ್ತಾರೋ ನೋಡೋಣ. ನಿಂದಕರಿರಬೇಕಿರಬೇಕು...

Sunday, January 28, 2007

ಸಮಾಜೋತ್ಸವಕ್ಕಾಗಿ ಒಂದಾದ ಹಿಂದು-ಮುಸ್ಲಿಮರು!








ಹಿಂದು ಸಮಾಜೋತ್ಸವ ನಡೆದರೆ ಕೋಮುಗಲಭೆಯಾಗುತ್ತದೆ, ಜಾತೀಯತೆ ಹೆಚ್ಚುತ್ತದೆ ಎಂದು ಗದ್ದಲವೆಬ್ಬಿಸಿ, ಮುಸ್ಲಿಮರನ್ನು ಸಮಾಜೋತ್ಸವಕ್ಕೆ ವಿರದ್ಧ ಸಿಡಿದೆದ್ದು ಗಲಭೆ ನೆಡೆಸುವ "ಸೌಹಾರ್ದ" ಸಂಘಟನೆಗಳ ಪ್ರಯತ್ನ ಭಗ್ನಗೊಂಡಿದೆ. ಭಾರೀ ಸಂಖ್ಯೆಯಲ್ಲಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿದ ಗಣ್ಯರು ಹಿಂದುಗಳು ಸಂಘಟಿತರಾಗುವ ಬಗ್ಗೆ, ಸಾಮರಸ್ಯದ ಅಗತ್ಯದ ಬಗ್ಗೆ, ಮಾತನಾಡಿದರೇ ಹೊರತು ಮುಸ್ಲಿಮರ ವಿರುದ್ಧವಲ್ಲ. ಸಮಾರಂಭದಲ್ಲಿ ಅನೇಕ ಮುಸಲ್ಮಾನರೂ, ಕ್ರಿಶ್ಚಿಯನ್ನರೂ ಭಾಗವಹಿಸಿದರು.
ಕೆಲವು ಚಿತ್ರ/ವರದಿಗಳು ಇಲ್ಲಿ ಲಭ್ಯ:

http://mangalorean.com/news.php?newstype=local&newsid=38555

http://www.mangalorean.com/news.php?newstype=broadcast&broadcastid=38617&PHPSESSID=d6baa8b3eeb50ec2d5cfdd9ae40bdccc

http://www.daijiworld.com/news/news_disp.asp?n_id=29945&n_tit=Mangalore%3A+%91Christians+will+Support+Hindu+Samajotsava%92

http://www.daijiworld.com/news/news_disp.asp?n_id=30010&n_tit=Mangalore%3A%20Viraat%20Hindu%20Samajotsava%20Held%20Under%20Tight%20Security

ಸೌಹಾರ್ದ ವೇದಿಕೆಯವರು ಮೈಪರಚಿಕೊಳ್ಳುತ್ತಿರಬೇಕು ಪಾಪ!
ಅವರು ಎಷ್ಟೇ ತುಪ್ಪ ಸುರಿದರೂ ಬೆಂಕಿಯೇ ಹತ್ತುತ್ತಿಲ್ಲವಲ್ಲ, ನಾರಾಯಣ ನಾರಾಯಣ!

Wednesday, January 24, 2007

ಆರೆಸ್ಸೆಸ್ ಕಾರ್ಯಕ್ರಮದ ಬ್ಯಾನರಿನಲ್ಲಿ ಏಸು!



ಶ್ರೀಕೃಷ್ಣ, ಭಾರತಮಾತೆ, ಗುರೂಜಿ ಭಾವಚಿತ್ರಗಳ ಜೊತೆಯಲ್ಲಿ ಏಸುವಿನ ಚಿತ್ರ! ಅದೂ ಹಿಂದೂ ಸಮಾಜೋತ್ಸವದ ಬ್ಯಾನರಿನಲ್ಲಿ! ನಿಜ, ಇಂತಹ ಸಾಮರಸ್ಯದ ಸಂಕೇತ ಮಂಗಳೂರಿನಲ್ಲಿ ಜ.೨೮ರಂದು ನಡೆಯುವ ಬೃಹತ್ ಹಿಂದೂ ಸಮಾಜೋತ್ಸವದ ಪ್ರಚಾರ ಬ್ಯಾನರಿನಲ್ಲಿ ಕಂಡುಬಂದಿದೆ.

ಹಿಂದೂ ಸಮಾಜೋತ್ಸವಕ್ಕೆ ಭಾರೀ ಬೆಂಬಲ ದೊರೆತಿದ್ದು ಸುಮಾರು ೩ ಲಕ್ಷ ಜನ ಭಾಗವಹಿಸಲಿದ್ದಾರೆಂದು ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಗುರೂಜಿ ಜನ್ಮ ಶತಾಬ್ಧಿ ಸಮಿತಿಯು ತಿಳಿಸಿದೆ.
ಏಸುವನ್ನು ಎತ್ತಿಕೋಡಿರುವ ಮೇರಿಯ ಚಿತ್ರವು ಅದರಲ್ಲಿದ್ದು "ಹಿಂದುತ್ವದಡಿಗಲ್ಲನು ಅಲುಗಿಸಲು ಸಲ್ಲ - ಅನ್ಯ ಮತಜರೇ ಇಲ್ಲಿ ಭೇದವದು ಸಲ್ಲ" ಎಂಬ ಘೋಷಾ ವಾಕ್ಯವು ಅದರಡಿಯಲ್ಲಿ ಕಂಡುಬಂದಿದೆ. ಸಂಘವು ಸರ್ವಧರ್ಮ ಸಮಭಾವವನ್ನು ಬೆಂಬಲುತ್ತದೆ. ಕ್ರೈಸ್ತರ ಭಾರತೀಕರಣವಾಗಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದು ಸಂಘವು ಹೇಳಿದ್ದು, ಮತಾಂತರದಂತಹ ಸಮಾಜದಲ್ಲಿ ಒಡಕುಂಟುಮಾಡುವ ಕಾರ್ಯವನ್ನಷ್ಟೇ ನಾವು ವಿರೋಧಿಸುತ್ತಿದ್ದೇವೆಂದು ತಿಳಿಸಿದೆ. ದೇವರನ್ನು ಯಾವ ಸ್ವರೂಪದಲ್ಲಾದರೂ ಪೂಜಿಸಬಹುದು. ಕೃಷ್ಣ-ಏಸು ಎಲ್ಲರೂ ಒಂದೇ ಎಂದು ಆರೆಸ್ಸೆಸ್ ಹೇಳಿದೆ. ನಾವು ಭಾರತದ ವೈವಿಧ್ಯತೆಯನ್ನು ಬೆಂಬಲಿಸುತ್ತೇವೆ, ಕ್ರಿಶ್ಚಿಯನ್ನರೂ ಅದರ ಭಾಗವಾಗಿದ್ದಾರೆ. ಈ ಉದಾಹರಣೆ ಕ್ರೈಸ್ತರ ಭಾರತೀಕರಣಕ್ಕೆ ಸಂಕೇತವಾಗಿದೆ ಎಂಬುದು ಅವರ ಅಭಿಪ್ರಾಯ.

ಆರೆಸ್ಸೆಸ್ ಮತ್ತು ಕ್ರೈಸ್ತರು ಒಂದಾದರೆ, ಸದ್ದಾಂ ಪರ ಸಭೆಯಲ್ಲಿ ಭಾಗವಸಿ, ಹಿಂದೂ ಕಾರ್ಯಕ್ರಮಗಳನ್ನು ವಿರೋಧಿಸುವ ಧರಂ ಸಿಂಗ್, ನವಾಜ್ ಶರೀಫರ ಗತಿ? ನಾರಾಯಣ ನಾರಾಯಣ!

ಎಲ್ಲರೂ ಪತ್ರಕರ್ತರು, ಎಲ್ಲೆಲ್ಲೂ ಸುದ್ದಿ!

ಹೌದು, ಪತ್ರಕರ್ತರು ಮಾತ್ರವಲ್ಲ. ಪ್ರತಿಯೊಬ್ಬರೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಉಳಿದವರು ಮಾಡುವ ಸುದ್ದಿಯನ್ನೇ ಹುಡುಕುವ ಈ ಸುದ್ದಿ ಪತ್ರಿಕೆಗೆ ಇತರ ದಿನಪತ್ರಿಕೆಗಳೇ ಸುದ್ದಿಮೂಲ.