Thursday, May 8, 2008

ಈ ಸುದ್ದಿ ಸಮೀಕ್ಷೆ: ಎಸ್ ಎಸ್ ಪಿ ಅಧಿಕಾರಕ್ಕೆ!

ಎಲ್ಲಾ ಪತ್ರಿಕೆ, ಟೀವಿಗಳಲ್ಲಿ ಚುನಾವಣಾ ಸಮೀಕ್ಷೆಗಳನ್ನು ನೋಡಿದ ನಾನು, ಈ ಸುದ್ದಿ ವತಿಯಿಮ್ದ ಸಮೀಕ್ಷೆಯನ್ನೇಕೆ ಮಾಡಬಾರದೆಂದು ಹೊರಟು ಜನಾಭಿಪ್ರಾಯವನ್ನು ಸಂಗ್ರಹಿಸಿದ್ದರ ಪರಿಣಾಮವೇ ಈ ಬ್ಲಾಗ್ ಪೋಸ್ಟ್.
ರಾಜ್ಯಾದ್ಯಂತ ಸರ್ವಜನ ಸಮುದಾಯ ಪಕ್ಷ (SSP) ಪರ ಭಾರೀ ಅಲೆ ಕಂಡುಬಂದಿದ್ದು ೨೨೮ರಲ್ಲಿ ೧೮೨.೪ ಸೀಟುಗಳನ್ನು ಪಡೆಯುವ ಮೂಲಕ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ಅಧಿಕಾರಕ್ಕೆ ಬರುವುದಾಗಿ ಭರವಸೆಯಲ್ಲಿದ್ದ ಕಜಪ (ಕರ್ನಾಟಕ ಜನತಾ ಪಕ್ಷ)ವು, ಕೇವಲ ೪೫.೬ ಸ್ಥಾನಗಳಿಗೆ ತೃಪ್ತಿಪಡಬೇಕಾಗುವುದು.

ವಿವಿಧ ಪಕ್ಷಗಳು ಪಡೆಯುವ ಶೇಕಡಾವಾರು ಮತಗಳು ಮತ್ತು ಒಟ್ಟು ಸ್ಥಾನಗಳು ಈ ರೀತಿಯಾಗಿವೆ:



ಪಕ್ಷ
%ಮತ
ಸ್ಥಾನಗಳು
SSP
೮೦%
೧೮೨.೪
KJP
೨೦%
೪೫.೬
BJP
೦%
0
Cong
೦%
0
JDS
೦%
0
Others
೦%0



ಸಮೀಕ್ಷೆಗಾಗಿ ಒಟ್ಟು ೫ ಜನರನ್ನು ಸಂಪರ್ಕಿಸಲಾಗಿದ್ದು, ಅವರಲ್ಲಿ ೪ ಜನ SSP ಮತ್ತು ಒಬ್ಬರು KJP ಗೆ ಮತ ನೀಡುವುದಾಗಿ ಹೇಳಿದ್ದಾರೆ.