
Monday, January 29, 2007
Sunday, January 28, 2007
ಸಮಾಜೋತ್ಸವಕ್ಕಾಗಿ ಒಂದಾದ ಹಿಂದು-ಮುಸ್ಲಿಮರು!

ಹಿಂದು ಸಮಾಜೋತ್ಸವ ನಡೆದರೆ ಕೋಮುಗಲಭೆಯಾಗುತ್ತದೆ, ಜಾತೀಯತೆ ಹೆಚ್ಚುತ್ತದೆ ಎಂದು ಗದ್ದಲವೆಬ್ಬಿಸಿ, ಮುಸ್ಲಿಮರನ್ನು ಸಮಾಜೋತ್ಸವಕ್ಕೆ ವಿರದ್ಧ ಸಿಡಿದೆದ್ದು ಗಲಭೆ ನೆಡೆಸುವ "ಸೌಹಾರ್ದ" ಸಂಘಟನೆಗಳ ಪ್ರಯತ್ನ ಭಗ್ನಗೊಂಡಿದೆ. ಭಾರೀ ಸಂಖ್ಯೆಯಲ್ಲಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿದ ಗಣ್ಯರು ಹಿಂದುಗಳು ಸಂಘಟಿತರಾಗುವ ಬಗ್ಗೆ, ಸಾಮರಸ್ಯದ ಅಗತ್ಯದ ಬಗ್ಗೆ, ಮಾತನಾಡಿದರೇ ಹೊರತು ಮುಸ್ಲಿಮರ ವಿರುದ್ಧವಲ್ಲ. ಸಮಾರಂಭದಲ್ಲಿ ಅನೇಕ ಮುಸಲ್ಮಾನರೂ, ಕ್ರಿಶ್ಚಿಯನ್ನರೂ ಭಾಗವಹಿಸಿದರು. ಕೆಲವು ಚಿತ್ರ/ವರದಿಗಳು ಇಲ್ಲಿ ಲಭ್ಯ: http://www.mangalorean.com/news.php?new http://www.daijiworld.com/news/news_dis http://www.daijiworld.com/news/news_dis ಸೌಹಾರ್ದ ವೇದಿಕೆಯವರು ಮೈಪರಚಿಕೊಳ್ಳುತ್ತಿರಬೇಕು ಪಾಪ! ಅವರು ಎಷ್ಟೇ ತುಪ್ಪ ಸುರಿದರೂ ಬೆಂಕಿಯೇ ಹತ್ತುತ್ತಿಲ್ಲವಲ್ಲ, ನಾರಾಯಣ ನಾರಾಯಣ! |
Wednesday, January 24, 2007
ಆರೆಸ್ಸೆಸ್ ಕಾರ್ಯಕ್ರಮದ ಬ್ಯಾನರಿನಲ್ಲಿ ಏಸು!
ಶ್ರೀಕೃಷ್ಣ, ಭಾರತಮಾತೆ, ಗುರೂಜಿ ಭಾವಚಿತ್ರಗಳ ಜೊತೆಯಲ್ಲಿ ಏಸುವಿನ ಚಿತ್ರ! ಅದೂ ಹಿಂದೂ ಸಮಾಜೋತ್ಸವದ ಬ್ಯಾನರಿನಲ್ಲಿ! ನಿಜ, ಇಂತಹ ಸಾಮರಸ್ಯದ ಸಂಕೇತ ಮಂಗಳೂರಿನಲ್ಲಿ ಜ.೨೮ರಂದು ನಡೆಯುವ ಬೃಹತ್ ಹಿಂದೂ ಸಮಾಜೋತ್ಸವದ ಪ್ರಚಾರ ಬ್ಯಾನರಿನಲ್ಲಿ ಕಂಡುಬಂದಿದೆ.
ಹಿಂದೂ ಸಮಾಜೋತ್ಸವಕ್ಕೆ ಭಾರೀ ಬೆಂಬಲ ದೊರೆತಿದ್ದು ಸುಮಾರು ೩ ಲಕ್ಷ ಜನ ಭಾಗವಹಿಸಲಿದ್ದಾರೆಂದು ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಗುರೂಜಿ ಜನ್ಮ ಶತಾಬ್ಧಿ ಸಮಿತಿಯು ತಿಳಿಸಿದೆ.
ಏಸುವನ್ನು ಎತ್ತಿಕೋಡಿರುವ ಮೇರಿಯ ಚಿತ್ರವು ಅದರಲ್ಲಿದ್ದು "ಹಿಂದುತ್ವದಡಿಗಲ್ಲನು ಅಲುಗಿಸಲು ಸಲ್ಲ - ಅನ್ಯ ಮತಜರೇ ಇಲ್ಲಿ ಭೇದವದು ಸಲ್ಲ" ಎಂಬ ಘೋಷಾ ವಾಕ್ಯವು ಅದರಡಿಯಲ್ಲಿ ಕಂಡುಬಂದಿದೆ. ಸಂಘವು ಸರ್ವಧರ್ಮ ಸಮಭಾವವನ್ನು ಬೆಂಬಲುತ್ತದೆ. ಕ್ರೈಸ್ತರ ಭಾರತೀಕರಣವಾಗಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದು ಸಂಘವು ಹೇಳಿದ್ದು, ಮತಾಂತರದಂತಹ ಸಮಾಜದಲ್ಲಿ ಒಡಕುಂಟುಮಾಡುವ ಕಾರ್ಯವನ್ನಷ್ಟೇ ನಾವು ವಿರೋಧಿಸುತ್ತಿದ್ದೇವೆಂದು ತಿಳಿಸಿದೆ. ದೇವರನ್ನು ಯಾವ ಸ್ವರೂಪದಲ್ಲಾದರೂ ಪೂಜಿಸಬಹುದು. ಕೃಷ್ಣ-ಏಸು ಎಲ್ಲರೂ ಒಂದೇ ಎಂದು ಆರೆಸ್ಸೆಸ್ ಹೇಳಿದೆ. ನಾವು ಭಾರತದ ವೈವಿಧ್ಯತೆಯನ್ನು ಬೆಂಬಲಿಸುತ್ತೇವೆ, ಕ್ರಿಶ್ಚಿಯನ್ನರೂ ಅದರ ಭಾಗವಾಗಿದ್ದಾರೆ. ಈ ಉದಾಹರಣೆ ಕ್ರೈಸ್ತರ ಭಾರತೀಕರಣಕ್ಕೆ ಸಂಕೇತವಾಗಿದೆ ಎಂಬುದು ಅವರ ಅಭಿಪ್ರಾಯ.
ಆರೆಸ್ಸೆಸ್ ಮತ್ತು ಕ್ರೈಸ್ತರು ಒಂದಾದರೆ, ಸದ್ದಾಂ ಪರ ಸಭೆಯಲ್ಲಿ ಭಾಗವಸಿ, ಹಿಂದೂ ಕಾರ್ಯಕ್ರಮಗಳನ್ನು ವಿರೋಧಿಸುವ ಧರಂ ಸಿಂಗ್, ನವಾಜ್ ಶರೀಫರ ಗತಿ? ನಾರಾಯಣ ನಾರಾಯಣ!
ಎಲ್ಲರೂ ಪತ್ರಕರ್ತರು, ಎಲ್ಲೆಲ್ಲೂ ಸುದ್ದಿ!
ಹೌದು, ಪತ್ರಕರ್ತರು ಮಾತ್ರವಲ್ಲ. ಪ್ರತಿಯೊಬ್ಬರೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಉಳಿದವರು ಮಾಡುವ ಸುದ್ದಿಯನ್ನೇ ಹುಡುಕುವ ಈ ಸುದ್ದಿ ಪತ್ರಿಕೆಗೆ ಇತರ ದಿನಪತ್ರಿಕೆಗಳೇ ಸುದ್ದಿಮೂಲ.
Subscribe to:
Posts (Atom)