ನಾರಾಯಣ ನಾರಾಯಣ!
ಈಗೀಗ ಭೂಮಿಗೆ ಬರುವುದೇ ಭಯವಾಗಿ ಬಿಟ್ಟಿದೆ. ಇತ್ತೀಚೆಗೆ ಒಂದು ದಿನ ಆರಾಮವಾಗಿ ತಿರುಗಾಡ್ತಾ ಇದ್ದೆ. ಭೂಮಿಯಿಂದ ಢಂ ಢಂ ಶಬ್ಧ ಕೇಳಿಸ್ತು. ಓಹೋ ದೀಪಾವಳಿ ಬಂತೇನೋ ಅಂತ ಅಲ್ಲಿ ಯಾರನ್ನೋ ಕೇಳಿದ್ರೆ ಅದು ಬಾಂಬ್ ಅಂತೆ!
ಇಷ್ಟೆಲ್ಲ ಸ್ಫೋಟ ಆಗ್ತಾ ಇದೆ, ಮನೆ ಸಚಿವರು ಏನು ಮಾಡ್ತಾರೆ ಕೇಳೋಣ ಅಂತ ಅವರ ಬಳಿಗೆ ಹೋಗಿ ಮಾತಾಡ್ಸಿದೆ.
ನಾ. : ನಾರಾಯಣ ನಾರಾಯಣ. ಶಿವರಾಜರಿಗೆ ನಮಸ್ಕಾರ...
ಮ.ಸ. : ನಮಸ್ಕಾರ ನಾರದರೇ ಬರ್ಬೇಕು.
ನಾ. : ಸಚಿವರೇ, ಆರಾಮನಾ ಅಂತ ನಿಮ್ಹತ್ರ ಕೇಳಲ್ಲ. ಈ ಬಾಂಬ್ ಸ್ಫೋಟಗಳ ಬಗ್ಗೆ ವಿಚಾರಿಸಿ ಹೋಗೋಣ ಅಂತ ಬಂದೆ.
ಮ.ಸ. : ನಾನು ಇಂದು ನಡೆದ ಸ್ಫೋಟವನ್ನು ಖಂಡಿಸ್ತೇನೆ. ಸ್ಫೋಟವನ್ನು ಯಾರೇ ಮಡಿರ್ಲಿ, ಅವರನ್ನು ಸರಕಾರ ಬಂಧಿಸದೆ ಬಿಡಲ್ಲ. ದೇಶದ ಭದ್ರತೆ ನಮ್ಮ ಪ್ರಥಮ ಆದ್ಯತೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸರಕಾರ ಸನ್ನದ್ಧವಾಗಿದೆ. ಈ ಧಾಳಿಯ ಹಂದೆ ಸಮಾಜ ಘಾತುಕ ಶಕ್ತಿಗಳ ಕೈವಾಡವನ್ನು ಶಂಕಿಸಲಾಗಿದೆ.
ನಾ.: ಅಯ್ಯಯ್ಯೋ! ಇವತ್ತೂ ಸ್ಫೋಟ ಆಯ್ತ? ನಂಗೆ ಗೊತ್ತೇ ಆಗಿರ್ಲಿಲ್ಲ!
ಮ.ಸ.: ಅಬ್ಬ! ಇವತ್ತು ಸ್ಫೋಟ ಆಗ್ಲಿಲ್ವ? ನೀವು ಸ್ಫೋಟದ ಬಗ್ಗೆ ಕೇಳಿದಾಗ ಇವತ್ತೂ ಆಯ್ತೇನೋ ಅಂದ್ಕೊಂಡೆ. ಇವತ್ತೇನಾದ್ರು ಸ್ಫೋಟ ಆಗಿ ನಂಗೆ ಗೊತ್ತೇ ಇರ್ಲಿಲ್ಲ ಅಂದ್ರೆ ನನ್ನ ಮಾನ ಎಲ್ಲಿ ಹೋಗುತ್ತೋ ಅಂತ ಹಾಗಂದೆ, ಬಾಂಬ್ ಸ್ಫೋಟ ಆದ್ರೆ ಸಾಮಾನ್ಯ ನಂಗೆ ಗೊತ್ತಾಗೇ ಆಗುತ್ತೆ. ನಮ್ಮ ಗುಪ್ತದಳ ತುಂಬಾ ಬಲಿಷ್ಠವಾಗಿದೆ. ಎಲ್ಲಾ ಟಿವಿ ಚಾನೆಲುಗಳನ್ನೂ ನೋಡ್ತಾ ಇರಿ, ಏನೇ ಆದ್ರೂ ನಂಗೆ ತಿಳಿಸಿ ಅಂತ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೀನಿ. ಆದ್ರೂ ಯಾಕೆ ಇನ್ನೂ ಸುದ್ದಿ ಬರ್ಲಿಲ್ಲ ಅಂದ್ಕೊಂಡೆ. ಸರಅದನ್ನ ಬಿಟ್ಟು ಬಿಡಿ.
ನಾ.: ಸಂತೋಷ... ಅದೆಲ್ಲಾ ಸರಿ, ಇದನ್ನೆಲ್ಲ ತ್ಡಿಯೋಕೆ ಯಾಕೆ ನಿಮಿಗೆ ಸಾಧ್ಯ ಆಗ್ತಾ ಇಲ್ಲ?
ಮ.ಸ.: ಸಮಸ್ಯೆ ಏನಂದ್ರೆ, ನಂ ಭಯೋತ್ಪಾದಕರಿಗೆ ತುಂಬ ಭಯ. ಬಾಂಬ್ ಇಟ್ಟಿದ್ದೀವೆ ಅಂತ ಈ ಮೇಲ್ ಮಾಡ್ತಾರೆ ಹೊರತು ಎಲ್ಲಿ ಅಂತ ಸ್ಪಷ್ಟವಾಗಿ ಹೇಳೋದೇ ಇಲ್ಲ. ನೀವೇ ಹೇಳಿ, ಅವರ ಹೇಳ್ದೇ ಇದ್ರೆ ಅದನ್ನು ಪತ್ತೆಹಚ್ಚೋಕಾಗುತ್ತ?
ನಾ.: ಹೌದು, ನೀವು ಹೇಳೋದು ಸರಿ ಇದೆ.
Tuesday, November 4, 2008
Monday, July 21, 2008
ಪ್ರತಾಪ್ ಸಿಂಹ ಕೈಯಲ್ಲಿ ಪೆನ್ನಲ್ಲ, ಗನ್ನು!
ಭೂಗತ ದೊರೆ ಮುತ್ತಪ್ಪ ರೈ ಅವರು ಪೆನ್ನು ಹಿಡಿದಿರುವುದನ್ನು ಈ ಹಿಂದೆ ಇಲ್ಲಿ ಬರ್ದಿದ್ದೆ. ಭೂಗತ ದೊರೆ ಗನ್ ಬಿಟ್ಟು ಪೆನ್ ಹಿಡಿದಿರುವುದು ಉತ್ತಮ ಬೆಳವಣಿಗೆ ಎಂದು ಸಂತಸಗೊಳ್ಳುತ್ತಿದ್ದಂತೆಯೇ, ಆಘಾತಕಾರೀ ಸುದ್ದಿಯೊಂದು ಹೊರಬಂದಿದೆ. ವಿಜಯ ಕರ್ನಾಟಕ ಅಂಕಣಕಾರ ಪ್ರತಾಪ್ ಸಿಂಹ ಅವರು ಗನ್ ಕೈಗೆತ್ತಿಕೊಂಡಿರುವ ವಿಚಾರ ಈಗಿನ ಈ ಸುದ್ದಿ.
ಪ್ರತಾಪ್ ಸಿಂಹ ತಮ್ಮ ವೆಬ್-ಸೈಟ್ ಆರಂಭಿಸಿರುವುದು ಇನ್ನೊಂದು ಸುದ್ದಿ. Pratap simha ಹೆಸರಿನಲ್ಲೇ ಇರುವ ಅವರ ತಾಣ ವೈಚಾರಿಕ ಗುದ್ದಾಟಕ್ಕೆ ಒಂದು ವೇದಿಕೆಯಾಗುವ ಸಾಧ್ಯತೆಗಳಿವೆ.
ಒಮ್ಮೆ pratapsimha.com ಹೋಗಿ ನೋಡಿ!
Thursday, May 8, 2008
ಈ ಸುದ್ದಿ ಸಮೀಕ್ಷೆ: ಎಸ್ ಎಸ್ ಪಿ ಅಧಿಕಾರಕ್ಕೆ!
ಎಲ್ಲಾ ಪತ್ರಿಕೆ, ಟೀವಿಗಳಲ್ಲಿ ಚುನಾವಣಾ ಸಮೀಕ್ಷೆಗಳನ್ನು ನೋಡಿದ ನಾನು, ಈ ಸುದ್ದಿ ವತಿಯಿಮ್ದ ಸಮೀಕ್ಷೆಯನ್ನೇಕೆ ಮಾಡಬಾರದೆಂದು ಹೊರಟು ಜನಾಭಿಪ್ರಾಯವನ್ನು ಸಂಗ್ರಹಿಸಿದ್ದರ ಪರಿಣಾಮವೇ ಈ ಬ್ಲಾಗ್ ಪೋಸ್ಟ್.
ರಾಜ್ಯಾದ್ಯಂತ ಸರ್ವಜನ ಸಮುದಾಯ ಪಕ್ಷ (SSP) ಪರ ಭಾರೀ ಅಲೆ ಕಂಡುಬಂದಿದ್ದು ೨೨೮ರಲ್ಲಿ ೧೮೨.೪ ಸೀಟುಗಳನ್ನು ಪಡೆಯುವ ಮೂಲಕ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ಅಧಿಕಾರಕ್ಕೆ ಬರುವುದಾಗಿ ಭರವಸೆಯಲ್ಲಿದ್ದ ಕಜಪ (ಕರ್ನಾಟಕ ಜನತಾ ಪಕ್ಷ)ವು, ಕೇವಲ ೪೫.೬ ಸ್ಥಾನಗಳಿಗೆ ತೃಪ್ತಿಪಡಬೇಕಾಗುವುದು.
ವಿವಿಧ ಪಕ್ಷಗಳು ಪಡೆಯುವ ಶೇಕಡಾವಾರು ಮತಗಳು ಮತ್ತು ಒಟ್ಟು ಸ್ಥಾನಗಳು ಈ ರೀತಿಯಾಗಿವೆ:
ಸಮೀಕ್ಷೆಗಾಗಿ ಒಟ್ಟು ೫ ಜನರನ್ನು ಸಂಪರ್ಕಿಸಲಾಗಿದ್ದು, ಅವರಲ್ಲಿ ೪ ಜನ SSP ಮತ್ತು ಒಬ್ಬರು KJP ಗೆ ಮತ ನೀಡುವುದಾಗಿ ಹೇಳಿದ್ದಾರೆ.

ಪಕ್ಷ | %ಮತ | ಸ್ಥಾನಗಳು |
SSP | ೮೦% | ೧೮೨.೪ |
KJP | ೨೦% | ೪೫.೬ |
BJP | ೦% | 0 |
Cong | ೦% | 0 |
JDS | ೦% | 0 |
Others | ೦% | 0 |
ಸಮೀಕ್ಷೆಗಾಗಿ ಒಟ್ಟು ೫ ಜನರನ್ನು ಸಂಪರ್ಕಿಸಲಾಗಿದ್ದು, ಅವರಲ್ಲಿ ೪ ಜನ SSP ಮತ್ತು ಒಬ್ಬರು KJP ಗೆ ಮತ ನೀಡುವುದಾಗಿ ಹೇಳಿದ್ದಾರೆ.
Thursday, April 10, 2008
ಬಡವರಿಗೆ ಉಚಿತ ಇಂಟರ್ನೆಟ್, ಕಡಿಮೆ ದರದಲ್ಲಿ ಪಿಜ್ಜಾ...
ನಾರಾಯಣ ನಾರಾಯಣ!
ಈ ಬಾರಿ ಚುನಾವಣೇಲೆ ಕಾಂಗ್ರೆಸ್ ಗೆದ್ಮೇಲೆ ಬಡವರಿಗೆ ಉಚಿತ ಕಲರ್ ಟಿವಿ, ೨ ರೂ. ಗೆ ಅಕ್ಕಿ, ೩% ಬಡ್ಡಿ ದರದಲ್ಲಿ ಸಾಲ ಇತ್ಯಾದಿ ಸಿಗುತ್ತೆ ಅಂತ ಘೋಷಣೆ ಹೊರಬಿದ್ದದ್ದೇ ತಡ, ಸಿ.ಆರ್.ಟಿ ಟಿವಿಗೆಲ್ಲ ಓಟು ಹಾಕಲು ನಾವೇನೂ ಕೊಂಗರಲ್ಲ, ನಮಗೆ ಎಲ್.ಸಿ.ಡಿ. ಟಿವಿಯೇ ಬೇಕೆಂದು ಕರ್ನಾಟಕದ ಜನರು ಆಗ್ರಹಿಸಿದ್ದಾರೆ. ರೈತರಿಗೆ ಸಿಗುವ ೩% ಬಡ್ಡಿದರದಲ್ಲಿ ಸಾಲದ ಭರವಸೆಯಿಂದ ಖುಷಿಯಾದ ರಿಯಲ್ ಎಸ್ಟೇಟ್ ಕುಳಗಳು, ತಾವೂ ರೈತರೆಂದು ಸಾಬೀತು ಪಡಿಸಲು ಈಗಾಗಲೇ ಕೆಲವು ಗಿಡಗಳನ್ನು ನೆಡಿಸಿದ್ದಾರೆ. ೩% ಬಡ್ಡಿಗೆ ಪಡೆದ ಸಾಲದ ಹಣವನ್ನು ಅಧಿಕ ಬಡ್ಡಿದರದಲ್ಲಿ ಅದೇ ಬ್ಯಾಂಕಿನಲ್ಲಿ ಠೇವಣಿ ಹೂಡಿ ಬಡ್ಡಿಯನ್ನು ಸಂಪಾದಿಸುವ ಯೋಜನೆ ಅವರದು. ಜೊತೆಗೆ, ಆ ಸಾಲವನ್ನೂ ಮುಂದಿನ ಬಜೆಟ್ಟಿನಲ್ಲಿ ಮನ್ನಾ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭರವಸೆಗಳಿಂದ ಪ್ರೇರಿತವಾಗಿರುವ ಇತರ ಪಕ್ಷಗಳೂ ತಮ್ಮ ಪ್ರಣಾಲಿಕೆಗಳನ್ನು ಭರದಿಂದ ಸಿದ್ಧಪಡಿಸುತ್ತಿದ್ದು, ಈ ಕೆಳಗಿನ ಅಂಶಗಳನ್ನು ಬರೆಯುತ್ತಿರುವುದು ಕಂಡುಬಂತು:
- ಕಡುಬಡವರಿಗೆ ಉಚಿತ ಇಂಟರ್ನೆಟ್: ನಾವು ಕಾಂಗ್ರೆಸ್ಸಿನಂತೆ ತಮಿಳುನಾಡಿನ ಪ್ರಣಾಳಿಕೆ ರಿಮೇಕ್ ಮಾಡುವುದಿಲ್ಲ. ಕರುಣಾನಿಧಿಗೆ ಸ್ವಂತ ಕೇಬಲ್ ನೆಟ್ವರ್ಕ್ ಇದೆ. ಟಿವಿ ಕೊಟ್ಟ್ರೆ ವ್ಯಾಪಾರ ಜಾಸ್ತಿ ಆಗ್ತದೆ ಅಂತ ಕೊಟ್ಟ್ರು. ನಾವು ಅದನ್ನೇ ಮಾಡೋದು ತಪ್ಪು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ವಯರ್-ಲೆಸ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ನೀಡುತ್ತೇವೆ. ಯೋಜನೆಯು ಕಡುಬಡವರಿಗೆ ಮಾತ್ರ ಲಭ್ಯವಿದ್ದು ಐಶಾರಾಮೀ ಉಪಕರಣಗಳಾದ ವಾಹನ, ಟಿವಿ, ಕಂಪ್ಯೂಟರ್ ಉಳ್ಳವರಿಗೆ ನೀಡಲಾಗುವುದಿಲ್ಲ.
- ಈ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಕಾಂಗ್ರೆಸ್ ಟಿವಿ ಪಡೆದ ಮನೆಗಳಿಗೆ ವಿದ್ಯುತ್ ಸಂಪರ್ಕ: ಈ ನಿರ್ಧಾರದ ಬಗ್ಗೆ ನಾವು ಅಚಲರಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ವಿದ್ಯುತ್ ನೀಡ ಬೇಕಿಲ್ಲ ಹಾಗೂ ನಾವು ಅಧಿಕಾರಕ್ಕೆ ಬಂದರೆ ಯಾರಿಗೂ ಟಿವಿ ಸಿಗುವುದಿಲ್ಲ ಎಂಬ ಧರ್ಯ ನಮಗಿದೆ.
- ಬಡವರಿಗೆ ಕಡಿಮೆ ದರದಲ್ಲಿ ಪಿಜ್ಜಾ: ರಾಜ್ಯದಲ್ಲಿ ಬಡತನ ಜಾಸ್ತಿಯಾಗುತ್ತಿದ್ದು ಅನೇಕರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ ಎಂದು ಮನಗಂಡ ನಮ್ಮ ಪಕ್ಷ, ಬಡವರಿಗೆ ಕೇವಲ ೯೫ ರೂ. ಗಳಿಗೆ ಪಿಜ್ಜಾ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಪಿಜ್ಜಾ ಕಾರ್ಡ್ ಎಂಬ ವಿನೂತನ ಕ್ರೆಡಿಟ್ ಕಾರ್ಡ್ ಮಾದರಿಯ ಕಾರ್ಡನ್ನು ಬಡವರಿಗೆ ವಿತರಿಸುವ ಯೋಜನೆಯಿದ್ದು, ಅದನ್ನು ಉಪಯೋಗಿಸಿ ಪಿಜ್ಜಾ ಪಡೆದರೆ ತಮ್ಮ ಬ್ಯಾಂಕ್ ಖಾತೆಯಿಂದ ಕೇವಲ ೯೫/- ರೂ. ಕಡಿತವಾಗಲಿದೆ.

Subscribe to:
Posts (Atom)